ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ 2023ರಲ್ಲಿ ಭಾಗವಹಿಸುವ ಗಜಪಡೆ ಸಾಂಸ್ಕೃತಿಕ ನಗರಿಗೆ ಆಗಮಿಸಿದೆ. ಮೈಸೂರಿನ ಅಶೋಕಾಪುರಂ ನಲ್ಲಿರುವ ಅರಣ್ಯಭವನದಲ್ಲಿ ಬೀಡುಬಿಟ್ಟಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಅರಣ್ಯಾಧಿಕಾರಿಗಳು ಸ್ವಾಗತಿಸಿದರು. ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಡೆ ಲಾರಿಗಳಲ್ಲಿ ಮೈಸೂರಿಗೆ ಆಗಮಿಸಿವೆ. ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಆನೆಗಳನ್ನು ಬರಮಾಡಿಕೊಳ್ಳಲಾಯಿತು.
ಇದೀಗ ಆನೆಗಳಿಗೆ ಸ್ನಾನ ಇತ್ಯಾದಿಗಳನ್ನು ಕಾವಾಡಿಗಳು,ಮಾವುತರು ನೆರವೇರಿಸುತ್ತಿದ್ದು ಖುಷಿ,ಖುಷಿಯಾಗಿ ಸೇವೆ ಪಡೆಯುತ್ತಿವೆ. ಅರಣ್ಯ ಭವನದಲ್ಲಿ ಆನೆಗಳು ಉಲ್ಲಾಸದಿಂದಿವೆ.
ಇಂದಿನಿಂದ ನಾಲ್ಕು ದಿನಗಳು ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡುವ ಗಜಪಡೆ. ಸೆ 5 ರಂದು ಮೈಸೂರು ಅರಮನೆ ಆವರಣಕ್ಕೆ ಬರಲಿವೆ.