ನಯಾಗಾರ ವಿ.ವಿ ಮತ್ತು ಡಿ.ಪಾಲ್ ಕಾಲೇಜಿನ ನಡುವೆ ಶೈಕ್ಷಣಿಕ ಒಪ್ಪಂದಕ್ಕೆ ಸಹಿ

ನಂದಿನಿ ಮೈಸೂರು

ನಯಾಗಾರ ವಿ.ವಿ ಮತ್ತು ಡಿ.ಪಾಲ್ ಕಾಲೇಜಿನ ನಡುವೆ ಶೈಕ್ಷಣಿಕ ಒಪ್ಪಂದಕ್ಕೆ ಸಹಿ

ಶೈಕ್ಷಣಿಕ ಕ್ಷೇತ್ರದಲ್ಲಿನ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಮೇರಿಕಾದ ನಯಾಗಾರ ವಿಶ್ವವಿದ್ಯಾನಿಲಯ ಹಾಗು ಮೈಸೂರಿನ ಡಿ.ಪಾಲ್ ಕಾಲೇಜು ಹಾಗೂ ಡಿ.ಪಾಲ್ ಅಂತರಾಷ್ಟ್ರೀಯ ಶಾಲೆ ನಡುವೆ ಪರಸ್ಪರ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಡಿ.ಪಾಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಯಾಗಾರ ವಿಶ್ವವಿಧ್ಯಾನಿಲಯದ ಅಧ್ಯಕ್ಷರಾದ ರೆವೆರೆಂಡ್ ಫಾದರ್ ಜೇಮ್ಸ್ ಮಾರ್ ಸಿ.ಎಂ, ಡಿ.ಪಾಲ್ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ.ಬೈಜು ಅಂತೋಣಿ ಸಿ.ಎಂ, ರೆ.ಫಾದರ್ ಬಿಜು ಸ್ಕರಿಯಾ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಮುಖ್ಯವಾಗಿ ವಿಧ್ಯಾರ್ಥಿಗಳಲ್ಲಿ ಕೌಶಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆದಿದ್ದು, ಈ ಮೂಲಕ ಪರಸ್ಪರ ವಿ.ವಿ ಗಳ ನಡುವೆ ವ್ಯಾಸಂಗದ ಅವಧಿಯಲ್ಲಿ ವಿಧ್ಯಾರ್ಥಿಗಳು ಎರಡು ವರ್ಷ ವಿದೇಶಿ ವಿ.ವಿಯಲ್ಲಿಯೂ ಓದುವ ಅವಕಾಶವನ್ನು ಹೊಂದಬಹುದಾಗಿದೆ, ಇದು ಪ್ರಾಧ್ಯಾಪಕರನ್ನೂ ಒಳಗೊಂಡಿದ್ದು ಸಂಶೋಧನೆ ಶೈಕ್ಷಣಿಕ ಭೋಧನೆಲ್ಲಿ ಅವಕಾಶವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೇಮ್ಸ್ ಮಾರ್ ಅವರು ಡಿ.ಪಾಲ್ ಕಾಲೇಜಿನ ನಡುವೆ ನಡೆದ ಈ ಶೈಕ್ಷಣಿಕ ಒಪ್ಪಂದವು ತಮಗೆ ಅತೀವ ಸಂತೋಷವನ್ನು ಉಂಟು ಮಾಡಿದ್ದು ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಭಾರದ ಪ್ರಾಂತಿಯ ಅಧ್ಯಕ್ಷರಾದ ರೆ.ಡಾ ಅನಿಲ್ ಥಾಮಸ್ , ಡಾ.ಬೈಜು ಅಂತೋಣಿ ಅವರು ಮಾತನಾಡಿದರು.

ವೇದಿಕೆಯಲ್ಲಿ ನಯಾಗಾರ ವಿ,ವಿ ಯ ಅಂತರಾಷ್ಟಿçÃಯ ಸಂಪರ್ಕ ವಿಭಾಗದ ಉಪಾದ್ಯಕ್ಷರಾದ ಡಾ.ದುಲೀಪ್ ದಿಯೋಸ್ತಲೆ, ಮೈಸೂರು ವಿ.ವಿ ವಿಶ್ರಾಂತ ಕುಲಪತಿಗಳಾದ ಕೆ,ಎಸ್ ರಂಗಪ್ಪ, ಡಿ.ಪಾಲ್ ಕಾಲೇಜಿನ ಹಣಕಾಸು ಅಧಿಕಾರಿ ಸ್ಯಾಟೋಯ್ ಕುರಿಯನ್. ಡಿ.ಪಾಲ್ ಶಾಲೆಯ ಪ್ರಾಂಶುಪಾಲರಾದ ರೆ.ಫಾ ಬಿಜು ಸ್ಕಾರಿಯ, ಶಿಜೋ ಅಂತೋನಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ವಿಧ್ಯಾರ್ಥಿಗಳು ಅದ್ಯಾಪಕ ವೃಂದ ಹಾಜರಿದ್ದರು.

Leave a Reply

Your email address will not be published. Required fields are marked *