ನಂದಿನಿ ಮೈಸೂರು
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಸಂಸ್ಥಾಪಕರಾದ ಭೂಮಿಪುತ್ರ ಸಿ. ಚಂದನ್ ಗೌಡ
ರವರು ಜಗತ್ ಪ್ರಸಿದ್ದ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಸ್ಪೇಸ್ ಮೀಡಿಯಾದ ಸಹಯೋಗದೊಂದಿಗೆ ಮರಳಿ ಸಂಸ್ಕೃತಿಗೆ ಶೀರ್ಷಿಕೆಯೊಂದಿಗೆ
ನಡೆದ ಸಮಾರಂಭದಲ್ಲಿ ಪೀಠಾಧಿಪತಿ ಶ್ರೀ.ಪರಮಪೂಜ್ಯ ಡಾ.ಶ್ರೀಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಚಂದನ್ ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮೈಸೂರಿನ ಕೆ.ಸಿ.ಚಲುವೇಗೌಡ ಗಾಯತ್ರಿ ಅವರ ಸುಪುತ್ರರಾಗಿ ಜನಿಸಿರುವ ಚಂದನ್ ಗೌಡರವರು ರೈತರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಸ್ಥಾಪಿಸಿ ಅದರ ರಾಜ್ಯಾಧ್ಯಕ್ಷರಾಗಿದ್ದಾರೆ.
ಮನುಷ್ಯ ಸತ್ತರೇ ಮಣ್ಣಿಗೆ ಮಣ್ಣೇ ಸತ್ತರೇ ಎಲ್ಲಿಗೆ ಎಂಬ ವಿಶೇಷ ವಿನೂತನ ವಿಚಾರಧಾರೆ ತಿಳಿಸಲು ಚಂದನ್ ಗೌಡ ಶ್ರಮಿಸುತ್ತಿರುವುದು ಶ್ಲಾಘನೀಯ.
ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿಯನ್ನು
ಮೇರು ನಟರುಗಳಾದ ಡಾ.ರಾಜ್ ಕುಮಾರ್,ರಜನಿಕಾಂತ್,
ಇನ್ಫೊಸೀಸ್ ನ ಡಾ.ಸುಧಾಮೂರ್ತಿ, ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್,ದರ್ಶನ್ , ನಟ ರಮೇಶ್ ಅರವಿಂದ್ ಅವರು ಪಡೆದುಕೊಂಡಿದ್ದು ಇದೀಗ ಚಂದನ್ ಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರನಟ ರಮೇಶ್ ಅರವಿಂದ್,ತಿಪಟೂರು ಶಾಸಕ ಷಡಕ್ಷರಿ,ಪ್ರತಾಪ್ ಸಿಂಹ ನಾಯಕ್, ಅಪ್ಪಾಜಿ ಸಿ.ಎಸ್.ನಾಡನಗೌಡ, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವಾ, ಇನ್ನಿತರರು ಉಪಸ್ಥಿತರಿದ್ದರು.