ರಾಘವೇಂದ್ರ ನಗರ, ಜೆಎಸ್ ಎಸ್ ಬಡಾವಣೆ ರಸ್ತೆಯಲ್ಲಿ ಒಳ ಚರಂಡಿ ಸಮಸ್ಯೆ ನಿವಾರಣೆ ನಿಟ್ಟುಸಿರು ಬಿಟ್ಟ ಸ್ಥಳೀಯ ನಿವಾಸಿಗಳು

ನಂದಿನಿ ಮೈಸೂರು

ಮೈಸೂರಿನ ರಾಘವೇಂದ್ರ ನಗರ ಹಾಗೂ ಜೆಎಸ್ ಎಸ್ ಬಡಾವಣೆ ಸೇರುವ ರಸ್ತೆಯಲ್ಲಿ ಒಳ ಚರಂಡಿ ಸಮಸ್ಯೆ ನಿವಾರಣೆಯಾಗಿದ್ದು ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬರೋಬ್ಬರಿ 25 ವರ್ಷದಿಂದ ನೆನೆಗುದಿಗೆ ಬಿದಿದ್ದ ಒಳಚರಂಡಿ ಅವ್ಯವಸ್ಥೆಯಿಂದ ಬಡಾವಣೆಯ ಜನರು ಹೈರಾಣಾಗಿದ್ರೂ.
ರಸ್ತೆಯಲ್ಲಿಯೇ ಒಳಚರಂಡಿ ನೀರು ಹರಿಯುತ್ತಿದ್ದು ಬಡಾವಣಿಯ ಜನರು ದಿನ ನಿತ್ಯ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು.
ಸಮಸ್ಯೆ ಪರಿಹರಿಸುವಂತೆ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇಂದು ಬೆಳಗ್ಗೆ ಬಡಾವಣೆ ವ್ಯಪ್ತಿಗೆ ಬರುವ ಪೋಲಿಸ್ ಠಾಣೆಯ ಪೋಲೀಸರ ಭದ್ರತೆ, ಸಂಬಂಧಪಟ್ಟ ಅಧಿಕಾರಿಗಳು ,ಇಂಜಿನಿಯರ್ ಗಳು,ಸ್ಥಳೀಯ ನಾಯಕರ ಸಹಕಾರದೊಂದಿಗೆ ಒಳಚರಂಡಿ ಸಮಸ್ಯೆ ಬಗೆಹರಿದೆ.

ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನ ಗಮನಿಸಿದ ಕೆ. ಪಿ. ಸಿ. ಸಿ ಕಾರ್ಯಧ್ಯಕ್ಷರು ಶಾಸಕರಾದ ತನ್ವೀರ್ ಸೇಠ್ ಹಾಗೂ ಜಿ.ಎನ್. ಮಂಜುನಾಥ್ ರವರ ಸಹಕಾರದಿಂದ ಕಾಮಗಾರಿ ಪೂರ್ಣಗೊಂಡಿದೆ. ಒಳಚರಂಡಿ ಸಮಸ್ಯೆ ಮುಕ್ತವಾದ ಹಿನ್ನೆಲೆ ಸ್ಥಳೀಯ ನಿವಾಸಿಗಳು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ‌.

ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯ ಸತ್ಯರಾಜ್,ಶ್ರೀಕಂಠಮೂರ್ತಿ,ಸ್ವಾಮಿ,ಶಿವು,ಪರಮೇಶ್,ಮಹದೇವಪ್ಪ,ಕರಿಗೌಡ್ರು,ನಂಜುಂಡಪ್ಪ,ರಾಜೇಂದ್ರ(ಗೊಂಬೆ)ಬಸವರಾಜಪ್ಪ,ಹೇಮಂತ್,
ರತ್ನಮ್ಮ,ಸರ್ವಮಂಗಳ,ಅಕ್ಕಮಹಾದೇವಿ, ಭಾರತೀ,ರೇಖಾ,ಚಂದ್ರಕಲಾ,ಸುಖೇಶಿನಿ,ಸವಿತಾ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.

Leave a Reply

Your email address will not be published. Required fields are marked *