ಪಂಚಮಿ ಶುಭ ದಿನದಂದು ಉಭಯ ಜಗದ್ಗುರುಗಳಿಗೆ ಕನಕಾಭಿಷೇಕ ,ಪುಷ್ಪಾಭಿಷೇಕ,ಪಾದ ಪೂಜೆ,ಗುರುವಂದನಾ ಕಾರ್ಯಕ್ರಮ

ವರದಿ:ಮನು 

ಅ.8 ಪಂಚಮಿ ಶುಭ ದಿನದಂದು ಉಭಯ ಜಗದ್ಗುರುಗಳಾದ ಪರಮಪೂಜ್ಯ ಜಗದ್ಗುರು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಪೀಠಾಧಿಪತಿಗಳಾದ ಶ್ರೀ ಸುಬುಧೇoದ್ರ ತೀರ್ಥ ಶ್ರೀ ಪಾದಂಗಳವರು ಹಾಗೂ ಸುತ್ತೂರು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿ ರವರುಗಳಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.

ಉದ್ಯಮಿ ಡಾಕ್ಟರ್ ಹೆಚ್ ಎಸ್
ರಾಘವೇಂದ್ರರಾವ್ ಅವರು ನಂಜನಗೂಡು ತಾಲೂಕು ಹೊಸಕೋಟೆ ಗ್ರಾಮದಲ್ಲಿ ಪರಮಪೂಜ್ಯರಿಗೆ ಮೊದಲು ಕುಟುಂಬದವರೆಲ್ಲ ಸೇರಿ ಪಾದ ಪೂಜೆ ಮಾಡಿದರು.ಕನಕಾಭಿಷೇಕ ,ಪುಷ್ಪಾಭಿಷೇಕ ನೆರವೇರಿಸಿದರು.ತದ ನಂತರ ಶ್ರೀ ಮೂಲ ರಾಮ ದೇವರ ಪೂಜೆಯನ್ನು ಸುಬುಧೇಂದ್ರ ತೀರ್ಥರು ಮಾಡಿದರು. ಖಾಸಗೀ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಇಬ್ಬರು ಸ್ವಾಮೀಜಿಗಳು ಆಶಿರ್ವಚನ ನೀಡಿದರು.ನೆರದಿದ್ದ ಭಕ್ತರಿಗೆ ತೀರ್ಥ ಪ್ರಸಾದ,ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಜಗದ್ಗುರು ಶ್ರೀ ಶ್ರೀ ಸುಬುಧೇoದ್ರ ತೀರ್ಥ ಶ್ರೀಪಾದಂಗಳವರು ಮಾತನಾಡಿ ಇಂದು ರಾಘವೇಂದ್ರ ಅವರು ಗುರುವಂದನಾ ಕಾರ್ಯಕ್ರಮ ಕ್ಕೆ ಆಹ್ವಾನಿಸಿದ್ದರು ನಾವು ಸಂತೋಷದಿಂದ ಭಾಗವಹಿಸಿದ್ದೇವೆ.ಸತ್ಯ ಧರ್ಮಗಳಿಗೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು ಸತ್ಯ ಧರ್ಮಗಳೆ ವ್ಯಕ್ತಿಯನ್ನು ಅತ್ಯಂತ ಎತ್ತರಕ್ಕೆ
ಕೊಂಡೊಯುತ್ತದೆ ಧರ್ಮವನ್ನು ಗಟ್ಟಿಗೊಳಿಸಬೇಕು. ದೇಶ ಭಕ್ತಿಯನ್ನು ಬೆಳೆಸಬೇಕು
ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ
ಹಾಗೂ ಎಲ್ಲರನ್ನೂ ಪೋಷಿಸಿ
ಮೇಲೆ ತರುವ ಪ್ರಯತ್ನ ಮಾಡಬೇಕಾಗಿದೆ.ದೇವಸ್ಥಾನದ ಲಡ್ಡು ಪ್ರಸಾದ ವಿಚಾರವಾಗಿವೂ ಮಾತನಾಡಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
ಮಂತ್ರಾಲಯಕ್ಕೂ ನಂಜನಗೂಡಿಗೂ ಒಂದು ಅವಿನಾಭಾವ ಸಂಬಂಧವಿದ್ದು
ಮಂತ್ರಾಲಯದ ಶ್ರೀಗಳ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದರು,ರಾಘವೇಂದ್ರ ರಾವ್ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮ ಕುರಿತಂತೆ ಹಿತ ನುಡಿಗಳನ್ನು ಹೇಳಿದರು.

ಉದ್ಯಮಿ ಡಾಕ್ಟರ್ ಹೆಚ್ ಎಸ್
ರಾಘವೇಂದ್ರರಾವ್ ಅವರು ಮಾತನಾಡಿ ಮಂತ್ರಾಲಯದ ಸ್ವಾಮಿಗಳು ಹಾಗೂ ಸುತ್ತೂರು ಶ್ರೀಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ.ಹೊಸಕೋಟೆ ಗ್ರಾಮಕ್ಕೆ ಒಳ್ಳೇಯದಾಗಲೀ ಜೊತೆಗೆ ದೇಶಕ್ಕೂ ಒಳಿತಾಗಲಿ ಎಂದು ಈ ಪೂಜೆ ಆಯೋಜಿಸಿದ್ದೇವು ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ
ಪತ್ರಿಕಾ ಸಂಪಾದಕರಾದ ವಿಶ್ವೇಶ್ವರ ಭಟ್. ಸೇರಿದಂತೆ
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *