ಮನು ಮೈಸೂರು
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 4 ವರ್ಷದಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ಸಿಲಿಕಾಥನ್ 2024 ಕ್ರೀಡಾಕೂಟ ಆಯೋಜಿಸಲಾಗಿತ್ತು.
ಮೈಸೂರಿನ ಲಲಿತಾದ್ರಿಪುರದಲ್ಲಿರುವ ಶಾಲೆಯ ಆವರಣದಲ್ಲಿ ಸಿಲಿಕಾಥನ್ ಕ್ರೀಡಾ ಕೂಟಕ್ಕೆ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ಕ್ರೀಡಾ ಜ್ಯೋತಿ ನೀಡಿದರು.ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಓಟದ ಸ್ಪರ್ಧೆಗೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಮೈಸೂರಿನ ಎಲ್ಲಾ ಶಾಲೆಯ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು 12 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಲ್. ರವಿ,
ಶಾಲೆಯ ಪ್ರಾಂಶುಪಾಲರಾದ ಡಾ.ದೀಪ್ತಿ ಚರ್ತುವೇದಿ, ಕೆ.ಎನ್.ಸಂತೋಷ್, ರೋಟರಿಯನ್ ಎಂ.ಮೋಹನ್, ಅಧ್ಯಾಪಕಿಯರು, ಕ್ರೀಡಾ ತೀರ್ಪುಗಾರರು ಭಾಗಿಯಾಗಿದ್ದರು.