ಮನುಪ್ರಸಾದ್ ಮೈಸೂರು
ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ 63ನೇ ಹುಟ್ಟು ಹಬ್ಬದ ಅಂಗವಾಗಿ ಮೈಸೂರು ಮೃಗಾಲಯದಲ್ಲಿ ಪ್ರಾಣಿಯೊಂದನ್ನ ದತ್ತು ಪಡೆದುಕೊಳ್ಳಲಾಯಿತು.

ಮೈಸೂರು ಮೃಗಾಲಯದಲ್ಲಿ ಕೆಪಿವೈಸಿಸಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಮಿತಿ ಅಧ್ಯಕ್ಷ ಮಂಜುನಾಥ್ ಗೌಡ ರವರ ನೇತೃತ್ವದಲ್ಲಿ ಆಫ್ರೀಕನ್ ಸಿಂಹ ದತ್ತು ಪಡೆಯಲಾಯಿತು.

ಆಫ್ರೀಕಾ ಸಿಂಹವನ್ನು 6 ತಿಂಗಳಿಗೆ ದತ್ತು ಪಡೆದುಕೊಳ್ಳಲಾಗಿದ್ದು ಇದರ ಶುಲ್ಕ 1 ಲಕ್ಷ ರೂಪಾಯಿಗಳಾಗಿರುತ್ತದೆ.1 ವರ್ಷಕ್ಕೆ ದತ್ತು ಪಡೆಯಲು ಚಿಂತನೆ ನಡೆಸಲಾಗಿದೆ. ಮೃಗಾಲಯದ
ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದತ್ತು ಪ್ರಮಾಣ ಪತ್ರ ವಿತರಿಸಿದರು.
ಇದೇ ಸಂದರ್ಭದಲ್ಲಿ
ರಾಷ್ಟೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ, ಕೆ ರ್ ಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷರು ಹೊಯ್ಸಳ ಎಂ ಆರ್, ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಬ್ರಾರ್, ನಗರ ಉಪಾಧ್ಯಕ್ಷ ನೌಫಿಲ್ ಅಹ್ಮದ್, ನಗರ ಕಾರ್ಯದರ್ಶಿ ಮಿರ್ ಕುಸ್ರು, ಎನ್ ಆರ್ ಕ್ಷೇತ್ರದ ಅಧ್ಯಕ್ಷ ಇಕ್ರಮ್, ಅಜಿಜ್ ಸೆಟ್ ಬ್ಲಾಕ್ ಅಧ್ಯಕ್ಷ ಸಾಕ್ಲೈನ್, ಶಶಾಂಕ್, ಫೈರೋಜ್, ಕೆ ಆರ್ ಬ್ಲಾಕ್ ಅಧ್ಯಕ್ಷರಾದ ಕಾರ್ತಿಕ್ ಎನ್, ಕಾರ್ತಿಕ್ ಕೆ, ಶಾಯೂಬ್, ಶ್ರೀಧರ್, ಹಾಗೂ ಶಂಕರ್, ಗಜ, ರವೀಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.