ಮೈಸೂರಿನಲ್ಲಿ ಓಣಂ ಆಚರಣೆ

ನಂದಿನಿ ಮೈಸೂರು

ಮೈಸೂರು:

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸುವರ್ಣ ಕರ್ನಾಟಕ ಕೇರಳ ಸಮಾಜಂ ವತಿಯಿಂದ ಕೇರಳಾ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕೇರಳ ನಾಡ ಹಬ್ಬವಾದ ಓಣಂ ಹಬ್ಬವನ್ನ ಮೈಸೂರಿನ ಉತ್ತನ ಹಳ್ಳಿಯ ಪಕ್ಕದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಕರ್ನಾಟಕದಲ್ಲಿ ನೆಲೆಯಾಗಿರುವ ಮಲಯಾಳಿ ಸಮಾಜದವರು ಮತ್ತು ಕೇರಳ ಸಮಾಜದವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೈಸ್ ಚಾನ್ಸೆಲ್ಲೂರ್ ಲೋಕನಾಥ್, ಆಯುರ್ಮಟ್ಟಮ್ ಸಂಪಸ್ತಾಪರು ಹಾಗೂ ಜಿಲ್ಲಾಧ್ಯಕ್ಷರು ಮನು ಮೆನೋನ್, ಅನಿಲ್ ತೋಮಸ್ ಮುಂತಾದವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಇನ್ನು ಕಾರ್ಯಕ್ರಮದಲ್ಲಿ ಕನ್ನಡಿಗರು ಕೂಡ ಭಾಗಿಯಾಗಿ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು
ಕೇರಳದ ಸಾಂಸ್ಕೃತಿಯನ್ನ ಹಾಗೂ ಓಣಂ ಹಬ್ಬವನ್ನ ಅಂದರ ವಿಶೇಷತಯನ್ನು ನಾಡಿಗೆ ತಿಳಿಸುವ ಕಾರ್ಯಕ್ರಮ ಇದಾಗಿತ್ತು,
ಕೇರಳದ ಕೆಲವು ಆಚರಣೆಗಳ ಮೂಲಕ ತಮ್ಮ ಹಬ್ಬವನ್ನ ಅದ್ದೂರಿಯಾಗಿ ಇಂದು ಮಾಡಲಾಯಿತು. ತಮ್ಮ ಆಚರಣೆಯಲ್ಲಿ ತೆಂಗಿನ ಹೊಂಬಾಳೆ ಯನ್ನು ಭತ್ತದ ಹೊಟ್ಟಿನಲ್ಲಿಟ್ಟು ಕೇರಳಾ ಸಮಾಜದವರು ನೃತ್ಯ ಮಾಡಿದರು. ಇನ್ನು ಓಣಂ ಹಬ್ಬಕ್ಕೆ ವಿಶೇಷ ವಾಗಿ 25 ರೀತಿಯ ಬಗೆಬಗೆಯ ತಿಂಡಿ ಮತ್ತು ಊಟವನ್ನು ಕೂಡ ಮಾಡಿಸಿ ಕೇರಳದ ರುಚಿಯನ್ನು ಮೆರೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮನು ಮೆನೋನ್ ಹಾಗೂ ಥೋಮಸ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

 

 

Leave a Reply

Your email address will not be published. Required fields are marked *