ಸ್ಟಾನೀ ಡಿ ಅಲ್ಮೆಡ ನಕಲಿ ದಾಖಲೆ ಸೃಷ್ಟಿಸಿ ಮೂಡಾದಿಂದ 25 ಸೈಟ್ ಪಡೆದಿರುವುದು ಕಾನೂನು ಬಾಹಿರ: ಸ್ಟಿಫನ್ ಸುಜೀತ್ ಆರೋಪ

ಮೈಸೂರು: ೧೯೯೨ ರಲ್ಲಿ ಮೈಸೂರು ಪ್ರಧಾನ ದೇವಾಲಯದ ಸಂತ ಫಿಲೋಮಿನಾ ಚರ್ಚ್ನ ಅಂದಿನ ಫಾದರ್ ಡೆನ್ನಿಸ್ ನೊರೊನ್ಹಾ ಅವರ ನೇತೃತ್ವದಲ್ಲಿ ೧೦೮ ಎಕರೆ ಜಾಗದಲ್ಲಿ ನೀಡಿದ್ದ ೧೪೬೨ ನಿವೇಶನಗಳನ್ನು ಮತ್ತೆ ಮುಡಾ ವಶ ಪಡಿಸಿಕೊಂಡಿರುವುದು ಸರಿಯಲ್ಲ. ಹೀಗಾಗಿ ನಿವೇಶನ ಪಡೆದವರಿಗೆ ಮರು ಹಂಚಿಕೆ ಮಾಡಬೇಕೆಂದು ಮೈಸೂರು ಧರ್ಮ ಪ್ರಾಂತ್ಯ ಕ್ರೈಸ್ತ ಜನರ ಅಭಿವೃದ್ಧಿ ಸಂಘದ ಅಧ್ಯಕ್ಷ ಜೆ. ಸ್ಟೀಫನ್ ಸುಜಿತ್ ಆಗ್ರಹಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾತನಾಡಿದ ಅವರು, ಮುಡಾ ಏಕಾಏಕಿ ಫಿಡಿಲಿಟ್ಸ್ ಕಾರ್ಪ್ ಪ್ರಾಪರ್ಟಿ ಸರ್ವೀಸ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ೧೦೮ ಎಕರೆಯಲ್ಲಿ ಕೆಥಡ್ರಲ್ ಪ್ಯಾರಿಶ್ ಸೊಸೈಟಿ ಎಂಬ ಸಂಸ್ಥೆಗೆ ೨೫ ನಿವೇಶನ ಇದಕ್ಕೆ ಸೇರಿದೆ ಎಂದಿದೆ. ಈ ಸಂಸ್ಥೆ ನಕಲಿ ದಾಖಲೆ ಸೃಷ್ಟಿಸಿ ಮುಡಾ ಅಧಿಕಾರಿಗಳನ್ನು ಶಾಮೀಲಾಗಿಸಿಕೊಂಡು ಕೋಟಿ ಕೋಟಿ ರೂ. ಬೆಲೆ ಬಾಳುವ ಈ ೨೫ ನಿವೇಶನ ನೀಡಿರುವುದು ಸರಿಯಲ್ಲ. ಈ ಸಂಸ್ಥೆಯ ಫಾದರ್ ಸ್ಟಾನೀ ಡಿ. ಅಲ್ಮೆಡಾ ಅವರ ವಿರುದ್ಧ ನ್ಯಾಯಾಲಯದಲ್ಲಿ ನಿವೇಶನ ವಿಷಯವಾಗಿ ಮೊಕದ್ದಮೆ ದಾಖಲಾಗಿದೆ.
ಹೀಗಾಗಿ ಈ ನಿವೇಶನ ವಾಪಸು ಪಡೆದು, ೧೯೯೨ ರಲ್ಲಿ ಹಂಚಿಕೆಯಾದವರಿಗೆ ಮರು ಹಂಚಿಕೆ ಮಾಡಬೇಕು. ಮುಡಾದ ಅಕ್ರಮದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಟೀಯಲ್ಲಿ
ಜಾನ್ ಫರ್ನಾಂಡಿಸ್, ಮರಿಯಾ ಫ್ರಾನ್ಸಿಸ್, ಆಂಬ್ರೂ ಜಾರ್ಜ್, ಜೋಸೆಫ್ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *