ಮೈಸೂರು ದಸರಾ ಆನೆಗಳ ಪರಿಚಯ
– ಅಭಿಮನ್ಯು:
ವಯಸ್ಸು : ೪೪ ವರ್ಷ
ಎತ್ತರ : ೨.೬೬ ಮೀಟರ್
ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಎದುರಿಸಿ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಕೂಂಬಿಂಗ್ ಕಾರ್ಯದಲ್ಲಿ ನಿಪುಣ.
– ಮಹೇಂದ್ರ
ವಯಸ್ಸು: ೪೦ ವರ್ಷ
ಅಂದಾಜು ತೂಕ : ೩೧೫೦ ಕೆಜಿ
ಎತ್ತರ : ೨.೭೪ ಮೀಟರ್
ಉದ್ದ : ೩.೨೫ ಮೀಟರ್
ಈ ಆನೆಯು ಕಳೆದ ಐದು ವರ್ಷಗಳ ಹಿಂದೆ ರಾಮನಗರ ಸಮೀಪದ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಿದ್ದ ಆನೆಯಾಗಿದ್ದು, ಎರಡನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ಗೋಪಿ
ವಯಸ್ಸು: ೪೧ ವರ್ಷ
ಎತ್ತರ : ೨.೯ ಮೀಟರ್
ಉದ್ದ : ೩.೪೧ ಮೀಟರ್
ತೂಕ : ೩೭೧೯ ಕೆಜಿ
ಈ ಆನೆಯನ್ನು ೧೯೯೩ರಲ್ಲಿ ಸಾಲೆಕೊಪ್ಪ ಅರಣ್ಯದಲ್ಲಿ ಸೆರೆಹಿಡಿದು ಪಳಗಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ೨೦೧೫ರಿಂದ ಅರಮನೆ ಪೂಜ ವಿಧಾನಗಳಲ್ಲಿ ಭಾಗವಹಿಸುತ್ತಿದೆ.
– ಧನಂಜಯ
ವಯಸ್ಸು : ೪೪
ಎತ್ತರ: ೨.೯೨ ಮೀಟರ್
ಉದ್ದ: ೩.೯೪ ಮೀಟರ್
ತೂಕ : ೪೦೫೦ ಕೆಜಿ
ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿದ್ದು ಕಳೆದ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
– ವಿಜಯ
ವಯಸ್ಸು: 64 ವರ್ಷ
ತೂಕ : ೩೨೫೦
ಎತ್ತರ : ೨.೨೯ ಮೀಟರ್
ಉದ್ದ : ೩ ಮೀಟರ್
ಈ ಆನೆಯು ಬಹಳ ಸಾಧು ಸ್ವಭಾವಾದಗಿದ್ದು, 1965ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.
– ವರಲಕ್ಷ್ಮಿ
ವಯಸ್ಸು : ೨೨ ವರ್ಷ
ತೂಕ : ೨೫೪೦ ಕೆಜಿ
ಎತ್ತರ : ೨.೯೨ ಮೀಟರ್
ಉದ್ದ : ೨.೦೫ ಮೀಟರ್
ಈ ಆನೆಯು ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸುತ್ತಿದೆ.
– ಭೀಮ
ವಯಸ್ಸು : ೨೩ ವರ್ಷ
ಎತ್ತರ : ೨.೮೭ ಮೀಟರ್
ಉದ್ದ : ೩.೦೬ ಮೀಟರ್
ತೂಕ: ೩೫೦೦ ಕೆಜಿ
ಈ ಆನೆ ೨೦೧೭ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅಂಬಾರಿ ಹೊರಲು ಸಮರ್ಥ ಎನಿಸಿಕೊಂಡಿದ್ದಾನೆ. ದಂತ ಹಾಗೂ ದೇಹ ರಚನೆ ಅತ್ಯದ್ಭುತವಾಗಿದ್ದು, ಸಮತಟ್ಟಾದ ಬೆನ್ನು ಹೊಂದಿರುವುದು ಅಂಬಾರಿ ಹೊರಲು ಸೂಕ್ತವಾಗಿದ್ದಾನೆ.
– ಅರ್ಜುನ:
ವಯಸ್ಸು : ೬೪ ವರ್ಷ
ಎತ್ತರ : ೨.೯೫ ಮೀಟರ್
ಉದ್ದ : ೩.೨೫ ಮೀಟರ್
ತೂಕ: ೬೦೪೦ ಕೆಜಿ
ಈ ಆನೆಯನ್ನು ೧೯೬೮ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ದ್ರೋಣ ಆನೆಯ ಅಕಾಲಿಕ ಮರಣ ನಂತರ ಒಮ್ಮೆ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದ. ಮಾವುತನನ್ನೇ ಕೊಂದದ್ದರಿಂದ ದಸರಾ ಅಂಬಾರಿ ಹೊರುವ ಕೆಲಸದಿಂದ ದೂರ ಇಡಲಾಯಿತು.
ಕಂಜನ್ ಆನೆ
24 ವರ್ಷ ದುಬಾರೆ ಶಿಬಿರ
ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ.